೫೦೦ ರತ್ತ ಅಂಬಾರಿ
Posted date: 05 Tue, May 2015 – 09:01:37 AM

ಪ್ಯಾಟಿ ಹುಡ್ಗೀರ ಹಳ್ಳಿ ಲೈಫು ಕನ್ನಡದ ಕೋಟ್ಯಾಧಿಪತಿ ಸೇರಿದಂತೆ ಹಲವಾರು ವಿಭಿನ್ನಶೈಲಿಯ ರಿಯಾಲಿಟಿ ಷೋಗಳಿಂದ ಕನ್ನಡಿಗರ ಮನೆಮಾತಾಗಿರುವ ಸುವರ್ಣವಾಹಿನಿ ಹೊಸ ಥರದ ಧಾರವಾಹಿಗಳನ್ನು ಪ್ರಸಾರ ಮಾಡುವುದರಲ್ಲೂ ಸೈ ಎನಿಸಿಕೊಂಡಿದೆ.  ಮಿಲನ, ಅಂಬಾರಿ, ಅಲ್ಲದೆ ಇನ್ನು ಹಲವಾರು ಧಾರವಾಹಿಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದೇ ಜನಪ್ರಿಯತೆಗೆ ಸಾಕ್ಷಿ.
ಕೈಲಾಶ್ ಮಳವಳ್ಳಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಂಬಾರಿ ಕೌಟುಂಬಿಕ ಸಮಸ್ಯೆಗಳು ಪತಿ-ಪತ್ನಿಯರ ಸರಸ, ವಿರಸ ಪ್ರೇಮ, ಪ್ರಣಯ ತಾಯಿ ಮಗನ ಸಂಬಂದ, ತೊಳಲಾಟದಂಥ ಎಲ್ಲಾ ಸಾಂಸಾರಿಕ ಅಂಶಗಳನ್ನೊಳಗೊಂಡ ಫ್ಯಾಮಿಲಿ ಪ್ಯಾಕೇಜ್ ದಾರವಾಹಿ ಎಂದರೆ ತಪ್ಪಾಗಲಾರದು. ಪ್ರತಿದಿನ ಸಂಜೆ ೬.೩೦ ರಿಂದ ೭ ರ ವರೆಗೆ ಪ್ರಸಾರವಾಗುತ್ತಿರುವ ಈ ಧಾರವಾಹಿ ಈಗ ಯಶಸ್ವಿಯಾಗಿ ೨೫೦ ಕಂತುಗಳನ್ನು ಮುಗಿಸಿ ೫೦೦ ರತ್ತ ದಾಪು ಕಾಲು ಹಾಕಿದೆ.
ಅಮ್ಮನ ಹುಡುಕಾಟದಲ್ಲಿರುವ ಪ್ರತಾಪ್‌ಗೆ ಅಮ್ಮ ಸಿಗುತ್ತಾರಾ, ಅಮ್ಮ ಸಿಕ್ಕ ನಂತರ ಪತ್ನಿ ಪಾರು ಮನವನ್ನು ಒಲಿಸಿಕೊಳ್ಳುವಲ್ಲಿ ನಾಯಕ ಪ್ರತಾಪ್ ಸಫಲನಾಗುತ್ತಾನಾ ಎಂಬುದನ್ನು ಇನ್ಮುಂದೆ ಬರುವ ಸಂಚಿಕೆಗಳಲ್ಲಿ ನಿರೂಪಿಸುತ್ತಿದ್ದೇವೆ ಎಂದು ನಿರ್ಮಾಪಕರಾದ ಟಿ.ಕೆ.ವಿಜಯಕುಮಾರ್ ಹೇಳಿದ್ದಾರೆ.  ವಿನಯ್ ಕೃಷ್ಣ ಕೂಡ ಈ ಧಾರವಾಹಿಯ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿಕ್ಕಮಂಗಳೂರು, ಶ್ರೀರಂಗಪಟ್ಟಣ, ಮೈಸೂರು ಮೊದಲಾದ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಂಬಾರಿಯ ಚಿತ್ರೀಕರಣ ನಡೆದಿದೆ.  ನಾಯಕ ವಿನಯ್‌ಗೌಡ ಪ್ರತಾಪ್ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿ ದಿವ್ಯ.ಎಂ. ಪಾರು ಪಾತ್ರದಲ್ಲಿ ಅಭಿನಯಿಸಿದ್ದಾರೆ.  ದಿವ್ಯ ಈಗಾಗಲೇ ಚಿಟ್ಟೆ ಹೆಜ್ಜೆ, ಸಪ್ತಪದಿ ಸೀರಿಯಲ್‌ಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತಳಾಗಿದ್ದರೂ ಈ ಧಾರವಾಹಿ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆಯಂತೆ.  ವೀಣಾ ಪೊನ್ನಪ್ಪ, ಪೂರ್ಣಚಂದ್ರ ತೇಜಸ್ವಿ ಮಾಸ್ಟರ್ ಚಿನ್ಮಯಿ, ಲಕ್ಷ್ಮೀಶ್ರೀ ಭಾಗವತರ್, ಅಶ್ವಥ್, ಕಾರ್ತಿಕ್, ರೇಖಾಕುಮಾರ್, ಗೌತಮಿ, ಮುಂತಾದವರ ಅಂಬಾರಿಯಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed